ABOUT THE CLUB
ಸುರಾನ ಕಾಲೇಜಿನ ಆರಂಭದೊಂದಿಗೆ 1995 ರಲ್ಲಿ ಕನ್ನಡ ವಿಭಾಗ ಅಸ್ಥಿತ್ವಕ್ಕೆ ಬಂದು, 1998 ರಲ್ಲಿ ʼಸಂಭ್ರಮ ಕನ್ನಡ ಸಂಘʼ ಹುಟ್ಟಿತು. ಅಂದಿನಿಂದ ನಿರಂತರವಾಗಿ ಮೌಲ್ಯವರ್ಧನ ಕಾರ್ಯಾಗಾರಗಳು, ಜನಪದ ಕಲೆಗಳ ತರಬೇತಿ, ಪಠ್ಯಗಳಿಗೆ ಅನುಕೂಲವಾದ ವಿಶೇಷ ಉಪನ್ಯಾಸಗಳು, ಕ್ಷೇತ್ರವೀಕ್ಷಣೆ, ಅಕ್ಷರಸಿರಿ ಗೋಡೆ ಪತ್ರಿಕೆ, ಅಂತರ ಕಾಲೇಜು ಹಾಗೂ ಅಂತರ ತರಗತಿ ಸ್ಪರ್ಧೆಗಳು, ರಾಜ್ಯ ಹಾಗೂ ರಾಷ್ಟ್ರ ಮಟ್ಟದ ವಿಚಾರ ಸಂಕಿರಣಗಳು, ಪುಸ್ತಕ ಪ್ರದರ್ಶನಗಳು, ರಂಗ ತರಬೇತಿ ಶಿಬಿರ ಹಾಗೂ ಮಾಹಿತಿ ತಂತ್ರಜ್ಞಾನ ಮತ್ತು ಕನ್ನಡ ಮುಂತಾದ ಮೌಲ್ಯವರ್ಧನ ತರಬೇತಿಗಳನ್ನು ನಡೆಸುತ್ತಾ ಬಂದಿದೆ.
ಸುರಾನ ಕಾಲೇಜಿನ ಪದವಿ ವಿಭಾಗದ ಕನ್ನಡ ವಿಭಾಗವು ಅತಿ ಹೆಚ್ಚು ವಿದ್ಯಾರ್ಥಿಗಳನ್ನು ಹೊಂದಿದ ವಿಭಾಗಗಳಲ್ಲಿ ಒಂದಾಗಿದೆ. ಪ್ರತಿವರ್ಷ 300 ರಿಂದ 350 ಕನ್ನಡ ವಿದ್ಯಾರ್ಥಿಗಳು ಹೊಸದಾಗಿ ಸೇರುತ್ತಾರೆ. 2 ಸೆಮಿಸ್ಟರ್ (1ಮತ್ತು3/ 2 ಮತ್ತು 4) ಸೇರಿಸಿದರೆ ಒಂದು ಸಮಯಕ್ಕೆ 700 ಕ್ಕೂ ಹೆಚ್ಚು ಕನ್ನಡ ವಿದ್ಯಾರ್ಥಿಗಳು ಇದ್ದಾರೆ.
ಕನ್ನಡ ವಿಭಾಗವು ಸಂಭ್ರಮ ಕನ್ನಡ ಸಂಘದ ಅಡಿಯಲ್ಲಿ ವಿದ್ಯಾರ್ಥಿಗಳಿಗೆ ಉಪಯುಕ್ತವಾಗುವ ಹಲವು ಪಠ್ಯೇತರ ಹಾಗೂ ಪಠ್ಯಕ್ಕೆ ಸಂಬಂಧಿಸಿದ ಬಹುಮುಖ್ಯವಾದ ಚಟುವಟಿಕೆಗಳನ್ನು ನಡೆಸುತ್ತಾ ಬಂದಿದೆ. ವಿದ್ಯಾರ್ಥಿಗಳಲ್ಲಿರುವ ಪ್ರತಿಭೆಯನ್ನು ಗುರುತಿಸಲು ಹಲವು ಸ್ಪರ್ಧೆಗಳನ್ನು ನಡೆಸಿ ಉತ್ತಮ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿ ಅಂತರಕಾಲೇಜು ಸ್ಪರ್ಧೆಗಳಿಗೂ ಕಳುಹಿಸುತ್ತೇವೆ.
ಕಾಲೇಜಿನ ನಮ್ ತಂಡ ಥಿಯೇಟರ್ ಕ್ಲಬ್ ನ ನಿರ್ವಹಣೆಯನ್ನು ಕನ್ನಡ ವಿಭಾಗವೇ ನಡೆಸುತ್ತಿದೆ. ಪ್ರತಿವರ್ಷ ಮೂರು ವಾರಗಳ ರಂಗತರಬೇತಿ ಶಿಬಿರವನ್ನು ಕಳೆದ ಆರು ವರ್ಷಗಳಿಂದ ನಿರಂತರವಾಗಿ ನಡೆಸಿಕೊಂಡು ಬರುತ್ತಿದೆ. ಪ್ರಸಿದ್ಧ ರಂಗ ಸಂಸ್ಥೆಗಳಾದ ಸಂಚಾರಿ, ಅಭಿನಯ ತರಂಗ, ಎನ್.ಎಸ್.ಡಿ, ಬೆನಕ ಮುಂತಾದ ಸಂಸ್ಥೆಗಳ ಸಹಯೋಗದೊಂದಿಗೆ ರಂಗ ತರಬೇತಿ ಶಿಬಿರವನ್ನು ನಡೆಸಿದೆ. ಕಳೆದ ಬಾರಿ ಸುಸ್ಥಿರ ಪ್ರತಿಷ್ಠಾನದ ಸಹಯೋಗದಲ್ಲಿ ಒಂದು ವಾರದ ರಂಗ ತರಬೇತಿ ಶಿಬಿರ ನಡೆಸಿದ್ದು ಈ ಮಧ್ಯದಲ್ಲಿ ಶಿವಮೊಗ್ಗ ರಂಗಾಯಣದ ಯುವ ರಂಗೋತ್ಸವದಿಂದ ನಾಟಕದ ಸ್ಪರ್ಧೆಗೆ ಆಹ್ವಾನ ಬಂದಿದ್ದು, ಅವರ ಸಹಯೋಗದಲ್ಲಿ ‘ಈ ಪಗರಣ’ ನಾಟಕವನ್ನು ಪ್ರದರ್ಶನ ಮಾಡಿದ್ದು, ಜಿಲ್ಲಾಮಟ್ಟದಲ್ಲಿ ಮೊದಲ ಹಾಗೂ ರಾಜ್ಯಮಟ್ಟದಲ್ಲಿ ಎರಡನೆಯ ಬಹುಮಾನ ಬಂದಿದ್ದು ನಮ್ಮೆಲ್ಲರಿಗೂ ಅತ್ಯಂತ ಸಂತೋಷದ ವಿಷಯ.
2021-22 ನೇ ಸಾಲಿನಿಂದ NEP ನಿಯಮದ ಅಡಿಯಲ್ಲಿ ಹೊಸ ಪಠ್ಯಪುಸ್ತಕ ತಯಾರಾಗಿದ್ದು, 60:40 ratio ದಲ್ಲಿ ಅಂಕಗಳು ನಿರ್ಧಾರವಾಗಿದೆ. ಇದಕ್ಕೆ ಬೆಂಗಳೂರು ವಿಶ್ವವಿದ್ಯಾಲಯವು ಹಲವಾರು ಚಟುವಟಿಕೆಗಳನ್ನು ಸೂಚಿಸಿದ್ದು, ತರಗತಿಗಳಲ್ಲಿ ವಿದ್ಯಾರ್ಥಿಗಳಿಗೆ 1 ಸೆಮಿಸ್ಟರ್ ಗೆ 2 ಸೆಮಿನಾರ್ ನಡೆಸಬೇಕು ಹಾಗೂ 20 ಅಂಕಗಳಿಗೆ ಸಂಕ್ಷೇಪ ಲೇಖನ ಪತ್ರಲೇಖನ ಇನ್ನಿತರ ವ್ಯಾಕರಣದ ಅಂಶಗಳನ್ನು ಸೇರಿಸಲಾಗಿದೆ. ವಿಶ್ವವಿದ್ಯಾಲಯ ಸೂಚಿಸಿರುವ ಚಟುವಟಿಕೆಗಳನ್ನು ವಿಬಾಗ ಸಮರ್ಥವಾಗಿ, ಅಚ್ಚುಕಟ್ಟಾಗಿ ನಿರ್ವಹಿಸುತ್ತಿದೆ.
2021 – 22 ನೇ ಸಾಲಿನಿಂದ ಸುರಾನ ಕಾಲೇಜು ಸ್ವಾಯತ್ತಗೊಂಡಿತ್ತು ಪದವಿ ವಿದ್ಯಾರ್ಥಿಗಳಿಗೆ ಇದು ಅನ್ವಯಿಸಲಿದೆ.
ಬೆಂಗಳೂರು ವಿಶ್ವವಿದ್ಯಾಲಯ ರೂಪಿಸಿರುವ ಪಠ್ಯಕ್ರಮವನ್ನು ಯಥಾವತ್ತಾಗಿ ಉಳಿಸಿಕೊಳ್ಳಲಾಗಿದೆ. ಹಾಗೆಯೇ ಬೆಂಗಳೂರು ವಿಶ್ವವಿದ್ಯಾಲಯ ತೀರ್ಮಾನಿಸಿರುವ ಪರೀಕ್ಷಾ ವಿಧಾನ, ಆಂತರಿಕ ಮೌಲ್ಯಮಾಪನದ ವಿಧಾನ ಹಾಗೂ ಪ್ರಶ್ನೆಪತ್ರಿಕೆ ಮಾದರಿಯನ್ನು ಸಹ ಹಾಗೆಯೇ ಉಳಿಸಿಕೊಳ್ಳಲಾಗಿದೆ.
ಮುಕ್ತ ಆಯ್ಕೆಯಾಗಿ ಕನ್ನಡವನ್ನು ತೆಗೆದುಕೊಳ್ಳುವ ಅವಕಾಶ ಇದೆ.
ಹಾಗೆಯೇ ಕಲಿಕಾ ಕನ್ನಡದ ಪಠ್ಯವನ್ನು Certificate course ರೂಪದಲ್ಲಿ ಬೋಧಿಸುತ್ತದೆ.
ರಂಗ ತರಬೇತಿಯನ್ನು ಡಿಪ್ಲೊಮ ಕೋರ್ಸ್ ರೂಪದಲ್ಲಿ ಪರಿಚಯಿಸುವ ಯೋಜನೆಯೂ ಇದೆ.
ಕನ್ನಡ ವಿಭಾಗದ ಪ್ರಾಧ್ಯಾಪಕರು
- ಡಾ. ವತ್ಸಲಾ ಮೋಹನ್ – ವಿಭಾಗದ ಮಖ್ಯಸ್ಥರು
- ಎನ್.ಸಿ. ಮಹೇಶ್ – ಸಹಾಯಕ ಪ್ರಾಧ್ಯಾಪಕರು
- ಡಾ. ಮಂಜುಳಾ ಗೋನಾಳ – ಸಹಾಯಕ ಪ್ರಾಧ್ಯಾಪಕರು
- ಡಾ. ಸುಷ್ಮಾ ಎಂ. – ಸಹಾಯಕ ಪ್ರಾಧ್ಯಾಪಕರು
- ಡಾ.ವಿಶಾಲಾ ವಾರಣಾಶಿ – ಸಂದರ್ಶಕ ಪ್ರಾಧ್ಯಾಪಕರು