ABOUT THE CLUB
ಸುರಾನ ಕಾಲೇಜಿನ ಸಾಂಸ್ಕೃತಿಕ ಇತಿಹಾಸದಲ್ಲಿ ರಂಗ ತರಬೇತಿ ಶಿಬಿರ ಮುಖ್ಯ ಸ್ಥಾನವನ್ನು ಪಡೆದುಕೊಂಡಿದೆ. ಯುವಕರನ್ನು ರಂಗಭೂಮಿಯತ್ತ ಸೆಳೆಯುವುದು ಹಾಗೂ ರಂಗಭೂಮಿಯ ಮೌಲ್ಯವನ್ನು ತಿಳಿಸಿಕೊಡುವುದು ನಮ್ಮ ಮುಖ್ಯ ಉದ್ದೇಶ. 2002 ರಿಂದ 2009 ರವರೆಗೆ ಭಾರತ ಯಾತ್ರಾ ಕೇಂದ್ರ ನಡೆಸುತ್ತಿದ್ದ ಸ್ಪರ್ಧೆಗಳಲ್ಲಿ ಸುರಾನ ಕಾಲೇಜು ಭಾಗವಹಿಸಿ ಸೇವಂತಿ ಪ್ರಸಂಗ, ಕಂಸಾಯಣ, ಮಾಮ ಮೋಶಿ, ಮೂರು ಕಾಸಿನ ಸಂಗೀತ ನಾಟಕ ಹಾಗೂ ಲೋಕೋತ್ತಮೆಯಂಥ ಬಹುಮುಖ್ಯವಾದ ನಾಟಕಗಳನ್ನು ಸಿದ್ಧಪಡಿಸಿದ್ದು ಇಂದಿಗೂ ಸುರಾನ ಕಾಲೇಜಿನ ರಂಗ ವಿಭಾಗದ ಹಸಿರಾದ ನೆನೆಪು.
2016 ರಿಂದ ಪ್ರತಿವರ್ಷ 30 ಗಂಟೆಗಳ ರಂಗತರಬೇತಿ ಶಿಬಿರವನ್ನು ನಡೆಸಿ ಶಿಬಿರದ ಕೊನೆಯಲ್ಲಿ ಪುಟ್ಟ ನಾಟಕವೊಂದನ್ನು ಪ್ರದರ್ಶಿಸಲಾಗುತ್ತಿದೆ. 2021-22 ರಲ್ಲಿ ಶಿವಮೊಗ್ಗ ರಂಗಾಯಣದ ಯುವರಂಗ ನಾಟಕೋತ್ಸವಕ್ಕೆ ಬೆಂಗಳೂರಿನಿಂದ ಆಯ್ಕೆಯಾದ 3 ಕಾಲೇಜುಗಳಲ್ಲಿ ನಮ್ಮದೂ ಒಂದು. ಶ್ರೀ.ಜೋಸೆಫ್ ಜಾನ್ ರಚಿಸಿ-ನಿರ್ದೇಶಿಸಿದ ಈ ಪಗರಣ ನಾಟಕ ಜಿಲ್ಲಾಮಟ್ಟದಲ್ಲಿ ಪ್ರಥಮ ಬಹುಮಾನ ಹಾಗೂ ರಾಜ್ಯಮಟ್ಟದಲ್ಲಿ ಎರಡನೇ ಬಹುಮಾನವನ್ನು ಗಳಿಸಿದೆ.